ಸಾರಾಂಶ

ಹಟಕ್ಕೆ ಬಿದ್ದು ತಾನು ಹೆತ್ತ ಮಗುವನ್ನ ಸಾಕಿ ಸಲಹುವ ಬದ್ಧತೆಯನ್ನು ತನ್ನದಾಗಿಸಿಕೊಳ್ಳುವ ಮಹಿಳೆಯರನ್ನು ವಿರಳವಾಗಿಯಾದರೂ ಕಾಣ ಬಹುದು.
ಸಮಾಜ ಕೆಂಗಣ್ಣು ಬೀರಿದರೆ, ಹಿರಿಯರು ಪ್ರಶ್ನಿಸಿದರೆ, ಕೇರ್ ಮಾಡದೆ ಇರಬಹುದು. ಆದರೆ ಹೆತ್ತ ಮಗುವೆ ದೊಡ್ಡದಾಗಿ ಪ್ರಶ್ನಿಸಿದಾಗ, ಆಕ್ಷೇಪಿಸಿದಾಗ, ಪ್ರತಿಭಟಿಸಿದಾಗ ಹೇಗೆ ಸಾಂತ್ವನಿಸುವುದು?
ಈ ಕಾದಂಬರಿಯ ಶರಧಿ ಈಗ ಪ್ರಶ್ನಿಸುತ್ತಾ ಇದ್ದಾಳೆ. ಹೇಗೆ ಸಾಂತ್ವನಿಸುವುದು? ತಂದೆ ಪ್ರೀತಿಯಿಂದ ದೂರ ಮಾಡುವ ಹಕ್ಕು ಹೆತ್ತ ತಾಯಿಗೂ ಇಲ್ಲ. ಇದು ಅವಳ ಪ್ರತಿಪಾದನೆ. ಅದಕ್ಕೆ ಎಷ್ಟೋ ಓದುಗರು ಕೈಜೋಡಿಸಲು ಮುಂದಾಗಿದ್ದಾರೆ.
ಶರಧಿಯ ಬಗ್ಗೆ ನಿಮಗೆ ಆತ್ಮೀಯತೆಯೊ? ಅನುಕಂಪವೊ? ತಿಳಿಸಿ.

ಶರಧಿ ಹೋಗಿ ಬಾ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2002
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
226
ಬೆಲೆ:
170 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು