ಓ.... ಹೆಣ್ಣೇ........ನೀನೆಷ್ಟು ಬದಲಾಗಿದ್ದಿ!
ಬೆರಳಂಚಿನಲ್ಲಿ ಮಿನುಗುವ ಮೊಬೈಲ್. ಅದರಲ್ಲಿ ಬಾಯ್ಫ್ರೆಂಡ್ನ ಮೈ ಝಮ್ಮಯೆನಿಸುವ ಸಂದೇಶ. ವ್ಯಾನಿಟಿ ಬ್ಯಾಗೊಳಗೆ ಕೂತ ಐಷಾಡಿನಲ್ಲಿ ಹಿಂದಿ ಹಾಡು, ಪ್ಯಾಂಟ್ ಕಿಸೆಯಲ್ಲಿರುವ ಪೆನ್ಡ್ರೈವ್ನಲ್ಲಿ ಹಾಲಿವುಡ್ ಮೂವಿ. ಹೆಗಲೇರಿ ಕೂತ ಲಾಟ್ಟಾಪ್ನಲ್ಲಿ ಆಫೀಸ್ ಅಸೈನ್ಮೆಂಟ್ ನಿನ್ನ ಬಿಜಿ ಲೈಫ್ನಲ್ಲೊಂದು ನಿನ್ನದೇ ಜಗತ್ತು. ಬೇರೆಯದಕ್ಕೆ ಪ್ರತಿಕ್ರಿಯಿಸಲು ಪುರಸೊತ್ತು ಇಲ್ಲ!
ತೀರಾ ಓದದ ಮುಗ್ಧ ಹೆಣ್ಣು ಶ್ಯಾನುಭೋಗದ ಮಗಳು ಸುತ್ತಲಿನ ಪರಿಸರ, ಹತ್ತಿರದ ಸಂಬಂಧಗಳಿಗೆ ಹೇಗೆ ಸ್ಪಂದಿಸುತ್ತಾಳೆ. ನಡೆದ ಅನ್ಯಾಯಕ್ಕೆ ಅವಳು ತೋರುವ ಪ್ರತಿಭಟನೆ ಎಷ್ಟೊಂದು ಅದ್ಭುತ!