ಸಾರಾಂಶ

ಕನಸು, ನಂಬಿಕೆ, ಸಾಧಿಸಲೇಬೇಕೆಂಬ ಛಲಕ್ಕೆ ಅದೆಂಥ ಶಕ್ತಿ ಇದೆ. ಆದು ಸಾಮಾನ್ಯವಾದುದಾಗಿರಲೀ, ಪುಟ್ಟದಾಗಿರಲೀ, ಅದರಲ್ಲಿ ತಲುಪುವ ಗಮ್ಯ ಮುಖ್ಯವಾಗುತ್ತೆ. ಅದಕ್ಕೆ ರೆಕ್ಕೆಗಳು ಮೂಡುತ್ತೆ. ಒಂದು ಕನಸಿಗೂ ಅದೆಂಥ ಶಕ್ತಿ ಇರುತ್ತದೆ. ಅಲ್ಲಿ ಬದ್ಧತೆ ಮುಖ್ಯವಾಗುತ್ತೆ. ಕನಸಿನ ಬಗ್ಗೆ ಒಂದು ಸಣ್ಣ ಉದಾಹರಣೆ.
ಅಂತರರಾಷ್ಟ್ರೀಯ ಸ್ಪೇಸ್ ಸ್ಟೇಷನ್ 'ಎಕ್ಸ್ಪೆಡಿಷನ್ ೩೩'?ರ ವಿಂಗ್ ಕಮಾಂಡರ್ ಆಗಿ ಅಂತರಿಕ್ಷಕ್ಕೆ ಹಾರಿದ ಹೆಮ್ಮೆಯ ಹೆಣ್ಣು ಮಗಳು 'xಪ್ನಿ ಞಎ? ೨೦೦೭ರಲ್ಲಿ ಅಂತರಿಕ್ಷಕ್ಕೆ ಹಾರುವ ಮುನ್ನ ಭಾರತೀಯರಿಗೆ ಸುನೀತಾ ನೀಡಿದ ಸಂದೇಶ: 'ಬಿಲೀವ್ ಇನ್ ಯುವರ್ ಡ್ರೀಮ್ಸ್'?- ನಿಮ್ಮ ಕನಸುಗಳಲ್ಲಿ ನಂಬಿಕೆ ಇರಲಿ.
ಹಾಗೆಯೇ ಸುಭಾಷಿಣಿಗೂ ಒಂದು ಕನಸು, ಸಾಧಿಸಲೇಬೇಕೆಂಬ ಛಲ.
"ಸುಭಾಷಿಣಿ ಕೂಗಿದ.
ವಾಹನಗಳ ಸಂಚಾರದಲ್ಲಿ ಇವನ ಕೂಗು ಅವಳಿಗೆ ಕೇಳಿಸಲಿಲ್ಲ. ಬಹುಶಃ ಅಂದು ಮೊಳೆಯೊಡೆದ ಚಪ್ಪಲಿ ಕಿತ್ತುಹೋಗಿರಬೇಕು. ಬಗ್ಗಿ ಎರಡು ಚಪ್ಪಲಿಗಳನ್ನು ಸೇರಿಸಿ ಪೇಪರ್ನಲ್ಲಿ ಸುತ್ತಿಕೊಂಡು ಅತ್ತಿತ್ತ ನೋಡದೆ ಸರಿದುಹೋದಳು. ಅವಳಿಗೊಂದು ಕನಸಿತ್ತು. ಗಮ್ಯವಿತ್ತು. ಅದನ್ನು ತಲುಪಲೇಬೇಕೆಂಬ ಛಲ.
ಅವಳ ಎತ್ತರಕ್ಕೆ ತೀರಾ ಕುಬ್ಜನಾದಂತೆ ಕಂಡ. ಬಸ್ಸಿನಲ್ಲಿ ಚೀಟಿ ಲಂಗ ತೊಟ್ಟು ಮುಗ್ಧವಾಗಿ ನಿಂತಿದ್ದ ಹುಡುಗಿ ಇವಳೇನಾ? ಹೌದು ಅವಳೇ!
ಅಂದಿನ ಚಿತ್ರ ಅವನ ಮನದಲ್ಲಿ ಇತ್ತು.

ಸುಭಾಷಿಣಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2013
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
170
ಬೆಲೆ:
110 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು