ಸೃಷ್ಟಿಗೆ ಒಂದು ನಿಯಮವಿದೆ;
ಲೋಕವೆಲ್ಲ ಏಕ ಕಾಲದಲ್ಲಿ ಕತ್ತಲಾಗಲು
ಸಾಧ್ಯವಿಲ್ಲ; ಒಂದುಕಡೆ ಕತ್ತಲಿದ್ದರೇ
ಇನ್ನೊಂದುಕಡೆ ಬೆಳಕು ಇದ್ದೇ
ತೀರಬೇಕು.
ಇಂಥ ಒಂದು ತತ್ವವೇ ಬದುಕಿಗೂ
ಅನ್ವಯ. ಜೀವನವು
ದ್ವಂದ್ವಾತ್ಮಕವಾದದ್ದು. ಪ್ರಪಂಚದಲ್ಲಿ
ಕೆಟ್ಟದ್ದೇ ತುಂಬಿಲ್ಲ, ಒಳ್ಳೆಯದಕ್ಕೂ
ಸ್ಥಾನವಿದೆ; ಇಂಥ ಒಂದು
ನಿಯಮದನ್ವಯ ಬದುಕು ಸಾಗುವಿಕೆ.
'ಕಲ್ಲಾಗು ಕಷ್ಟಗಳ ಮಳೆಯ ವಿಧಿ
ಸುರಿಯೇ' ಇದು ಪರಮ ಜ್ಞಾನಿ ಮಂಕು
ತಿಮ್ಮನ ಉಪದೇಶ.