ಸಾರಾಂಶ

ಸ್ವಾಮಿ ಹತ್ತು ವರ್ಷದ ಹುಡುಗ. ಅವನ ಬದುಕೆಂದರೆ ಅವನು ತನ್ನ ಗೆಳೆಯರೊಡಗೂಡಿ ನಡೆಸುವ ಸಾಹಸ ಕಾರ್ಯಗಳು, ಹೋಂವರ್ಕಿನ ತಾಪತ್ರಯಗಳಿಂದ ತಪ್ಪಿಸಿಕೊಳ್ಳುವ ಯತ್ನಗಳು ಮತ್ತು ತನಗೆ ಸಾಧ್ಯವಿರುವಷ್ಟರ ಮಟ್ಟಿಗೆ ತನಗೆದುರಾಗುವ ಮೇಸ್ಟರ ಹಾಗೂ ಹಿರಿಯರ ನಿಭಾವಣೆ. ಅವನು ಗಾಢಾನುರಕ್ತನಾಗುವುದು ಯಾವುದರತ್ತ ಎಂದರೆ, ಅದು ಅವನು ತನ್ನ ಗೆಳೆಯರೊಡಗೂಡಿ ಸ್ಥಾಪಿಸಿದ ಎಂಸಿಸಿ-ಮಾಲ್ಗುಡಿ ಕ್ರಿಕೆಟ್ ಕ್ಲಬ್. ಅವನ ಮಹಾ ರಂಜನೀಯ ದಿನಗಳೆಂದರೆ, ಪರೀಕ್ಷೆಗಳು ಮುಗಿದು ಸಂತೋಷ ಸಂಭ್ರಮಗಳಲ್ಲಿ ತೊಡಗಿಕೊಳ್ಳುವ ರಜೆಯ ದಿನಗಳು. ಆದರೆ ಈ ಮುಗ್ಧ ಹಾಗೂ ಹಿಂದು ಮುಂದು ನೋಡದೆ ನುಗ್ಗುವ ಸ್ವಭಾವದ ಸ್ವಾಮಿ ೧೯೩೦ರಲ್ಲಿ ಭಾರತದಲ್ಲಿದ್ದ ಗಂಭೀರ ಸ್ವರೂಪದ ತುಮುಲದ ಸಂದರ್ಭದಲ್ಲಿ ಮನೆಯನ್ನು ತೊರೆದು ಹೋಗುವ ಸನ್ನಿವೇಶ ಉಂಟಾಗುತ್ತದೆ.
ಇದು ಕೇವಲ ಸ್ವಾಮಿಯ ಸಾಹಸಕಾರ್ಯಗಳ ನಿರೂಪಣೆಯಿಂದ ದೊರಕುವ ಮನರಂಜನೆಯನ್ನು ಒಳಗೊಂಡಿಲ್ಲ. ಸ್ವಾಮಿಯ ಕಣ್ಣುಗಳಿಂದಲೆ ಮಕ್ಕಳ ಲೋಕವನ್ನು ಹಾಗೂ ಮುಂದಿನ ದಿನಗಳಲ್ಲಿ ಅವನು ಸೇರಿಹೋಗಲಿರುವ ದೊಡ್ಡವರ ಲೋಕವನ್ನು ಕಟ್ಟಿಕೊಡುವ ಆರ್.ಕೆ. ನಾರಾಯಣ್ ತಮ್ಮ ಮುಂದಿನ ಕಾದಂಬರಿಗಳಿಗೆ ನೆಲೆಸ್ಥಾನವಾದ ಮಾಲ್ಗುಡಿಯ ವಿನ್ಯಾಸವನ್ನೂ ಕಟ್ಟುತ್ತಾರೆ.
ಇಂತಹ ಪುಸ್ತಕಗಳು ಹತ್ತು ಸಾವಿರಕ್ಕೆ ಒಂದು - ಗ್ರಹಾಂ ಗ್ರೀನ್

ಸ್ವಾಮಿ ಮತ್ತು ಸ್ನೇಹಿತರು
ಲೇಖಕರು:
ಆರ್ ಕೆ ನಾರಾಯಣ್
ಅನುವಾದಕರು :
ಪ್ರಮೋದ ಮುತಾಲಿಕ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2016
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
184
ಬೆಲೆ:
140 ರೂ.
ಲೇಖಕರ ಪರಿಚಯ
ಪ್ರೊ. ಪ್ರಮೋದ ಮುತಾಲಿಕ ಅವರು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರು. ಅನುವಾದ ಮತ್ತು ವಿಮರ್ಶೆ ಇವರ ಮುಖ್ಯ ಆಸಕ್ತಿ. ೧೯೯೮ರಲ್ಲಿ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕಾದಂಬರಿ ಕಳಚಿದ ಕೊಂಡಿ ಹೆಸರಿನಲ್ಲಿ ಉತ್ತರ ಕರ್ನಾಟಕ ಉಪಭಾಷೆಯ ಸೊಗಡಿನೊಂದಿಗೆ ಅನುವಾದಗೊಂಡು ಪ್ರಕಟವಾಯ್ತು. ಜಗತ್ತಿನ ಕೆಲ ಶ್ರೇಷ್ಠ ಕತೆಗಳನ್ನು ಅನುವಾದಿಸಿ ಕಣಜ ಎಂಬ ಸಂಗ್ರಹವನ್ನು ಪ್ರಕಟಿಸಿದ್ದಾರೆ. ಇದಲ್ಲದೆ ಡಾ. ಎಚ್. ನರಸಿಂಹಯ್ಯನವರ ಆತ್ಮಕಥೆ ’ಹೋರಾಟದ ಹಾದಿ’ಯ ಇಂಗ್ಲಿಷ್ ಅನುವಾದ ಪ್ರಕಟಣೆಗೆ ಸಿದ್ಧವಾಗಿದೆ. ಸಾಹಿತ್ಯ ವಿಮರ್ಶೆಯ ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.