ಅನಿರೀಕ್ಷಿತ ಸಂದರ್ಭ, ಸನ್ನಿವೇಶದಲ್ಲಿ ಜೊತೆಯಲ್ಲಿದ್ದ ಯುವಕನನ್ನ ಪರಿಚಯಿಸಿದ್ದು 'ಹಕ್ಕು, ಅಧಿಕಾರ ಇಲ್ಲದ ಜೊತೆಗಾರ.' ಮೊದಲು ಷಾಕಾದರೂ ಸುಲಭವಾಗಿ ಅರ್ಥೈಸಿಕೊಂಡೆ. ಮದುವೆ ವ್ಯವಸ್ಥೆಗೆ ಪರ್ಯಾಯವಾದದ್ದು 'ಲಿವಿಂಗ್-ಟು-ಗೆದರ್, ಲಿವ್-ಇನ್-ರಿಲೇಷನ್', ಇಷ್ಟಪಟ್ಟು ಒಟ್ಟೊಟ್ಟಿಗೆ ವಾಸಿಸುತ್ತಾರೆ. ಬೇಡವೆನಿಸಿದರೆ ಬಿಟ್ಟು ಹೋಗುವುದು ನಿರಾಳ!
ಇಂಥದೊಂದು ವಸ್ತು ತಲೆಯನ್ನು ಕೊರೆಯುತ್ತಿತ್ತು; ಅಕ್ಷರ ರೂಪ ಪಡೆದುಕೊಂಡು ನಿಮ್ಮ ಕೈ ಸೇರಿತು. ಕಾದಂಬರಿ ಓದಿದವರೆಲ್ಲ ಹಲವು ಹತ್ತು ವಿಷಯಗಳನ್ನು ಹಂಚಿಕೊಂಡರು.
ಎರಡು ಧವಗಳಾದ ಶರಾವತಿ, ಶರಧಿ ವಿಶ್ಲೇಷಣೆಗಳು ತೀರಾ ಭಿನ್ನವಾಗಿವೆ.
ಶರಾವತಿ-ಶರಧಿ ಅಂಥವರನ್ನು ನೀವು ನೋಡಿರುತ್ತೀರಿ!