ಸಾರಾಂಶ

ತೀರಾ ವೈಯಕ್ತಿಕವೆನಿಸುವ ಸಣ್ಣ ಸಮಸ್ಯೆ
ಅದು ದಿನೇ ದಿನೇ ಪಡೆದುಕೊಳ್ಳುವ ತಿರುವುಗಳು
ಅವು ಬಿಚ್ಚಿಡುವ ಸತ್ಯಗಳು ಬೆಚ್ಚು ಬೀಳಿಸುವಂಥವು
ಜೊತೆಗೆ ನಮ್ಮ ಪ್ರಸ್ತುತ ಸಮಾಜ ಮುಖವನ್ನು,
ರಾಜಕೀಯ ವಿದ್ಯಮಾನಗಳನ್ನು ತೆರೆದಿಡುತ್ತದೆ.
ಸಂಬಂಧವೇ ಇಲ್ಲದವರ ಹಸ್ತಕ್ಷೇಪ ದಾದಾಗಳು
ಭೂಗತ ಪಾತಕಿಗಳು ಭೂ ಮಾಫಿಯಾ
ದೊರೆಗಳು ವ್ಯಾಪಾರಿಗಳು ಅರಕ್ಷಕರು...
ಮೈ ಕೊಡವಿಕೊಂಡು ವಿಜೃಂಭಿಸುವ ಪರಿ ಇಲ್ಲಿ
ಕಾಣಬಹುದು. ಯಾವುದೇ ಸುಳಿವಿಲ್ಲದೆ ಎಲ್ಲವನ್ನೂ
ತಣ್ಣಗಾಗಿಸಿಬಿಡುವ ಪ್ರಯತ್ನ.
ಮಧ್ಯಮ ವರ್ಗದವರ ಬದುಕು ಬವಣೆ ಆದರ್ಶ.
ಪ್ರಾಮಾಣಿಕತೆ, ಮುಗ್ಧತೆ ಇಡೀ ಸಮಾಜದ
ಹೊಲಸನ್ನೇ ಕಿತ್ತೊಗೆದು ಬಿಡುವ ಛಲ... ಉತ್ಸಾಹ,
ಹುಮ್ಮಸ್ಸು... ಹೋರಾಟ...
ಪಾರ್ಥೇನಿಯಂನಂತೆ ಹರಡಿಕೊಳ್ಳುವ
ರಾಜಕೀಯ ಬೇಲಿ-ಅಮಾಯಕರ ಬಲಿ; ವಾಸ್ತವದ
ನೆಲೆಯಲ್ಲಿ ಅವಾಸ್ತವ ಎನಿಸದ
ವಿಡಂಬನಾತ್ಮಕ ಕಾದಂಬರಿ.

ಡೈರಿ ಆಫ್ ಮಿಸೆಸ್ ಶಾರದಾ
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1996
ರಕ್ಷಾಪುಟ:
ಮೋನಪ್ಪ
ಪುಟಗಳು:
360
ಬೆಲೆ:
180 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು