ಜೀವನವನ್ನು ಅಳೆಯುವ ಮಾನದಂಡ ಯಾವುದು? ಈ ಒಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹಲವಾರು ಸಂದರ್ಭಗಳಿಗೂ ಅನುಗುಣವಾಗಿ ಉತ್ತರಗಳನ್ನು ಹುಡುಕಿಕೊಂಡಿದ್ದಿದೆ. ಪ್ರತಿಯೊಂದಕ್ಕೂ ಅನ್ವಯವಾಗುವುದು ಮಾನವೀಯತೆಯೆ.
ಕೇವಲ ವೈಯಕ್ತಿಕ ಜೀವನವನ್ನು ಅವಲಂಬಿಸಿದ್ದ ಆದಿ ಮಾನವನಿಗೆ ಆಚಾರ-ವಿಚಾರ, ಕಟ್ಟು-ಕಾಯಿದೆ, ಸಂಪ್ರದಾಯಗಳ ಅಗತ್ಯವಿರಲಿಲ್ಲ. ಸಮಾಜದಲ್ಲಿ ಹತ್ತು ಜನ, ನೂರು ಜನ ಒಟ್ಟೊಟ್ಟಿಗೆ ಬಾಳುವಾಗ ಸರ್ವರಿಗೂ ಅನ್ವಯವಾಗುವಂಥ ವಿಧಿ, ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಅದನ್ನು ಶೋಭ, ಅನುಪಮ, ಸತೀಶ್ ಪಾತ್ರಗಳಲ್ಲಿ ಕಾಣಬಹುದು.