A book is a dream you hold in your hands

Summer Learning for Kids: ಕಥೆ ಪುಸ್ತಕಗಳು ಮತ್ತು ವರ್ಕ್‌ಬುಕ್‌ಗಳು

Kannada children books for kids summer learning with Kannada story books and workbooks for reading and writing practice

ಬೇಸಿಗೆ ರಜೆಗಳು ಮಕ್ಕಳಿಗೆ ಅತ್ಯಂತ ಸಂತೋಷದ ಸಮಯದ ಜೊತೆ ಹೊಸ ವಿಷಯಗಳನ್ನು ಕಲಿಯಲು ಉತ್ತಮ ಅವಕಾಶ.  ರಜೆಯನ್ನು ಕೇವಲ ಆಟ ಮತ್ತು ಮೊಬೈಲ್ ಬಳಕೆಯಲ್ಲಿ ಕಳೆಯದೆ, ಓದುವ ಮತ್ತು ಕಲಿಕೆಯ ಅಭ್ಯಾಸವನ್ನು ಬೆಳೆಸುವುದು ಸೂಕ್ತ .

ಮಕ್ಕಳ ಕಥೆ ಪುಸ್ತಕಗಳು ಮಕ್ಕಳಿಗೆ ಕೇವಲ ಮನರಂಜನೆ ಮಾತ್ರವಲ್ಲ, ಅವು ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಕಥೆಗಳ ಮೂಲಕ ಮಕ್ಕಳು ಸತ್ಯ, ಪ್ರಾಮಾಣಿಕತೆ, ಧೈರ್ಯ ಮತ್ತು ಸಹನೆಯಂತಹ ಮೌಲ್ಯಗಳನ್ನು ಸುಲಭವಾಗಿ ಕಲಿಯುತ್ತಾರೆ. ಓದುವ ಅಭ್ಯಾಸದ ಜೊತೆ ಹೊಸ ಪದಗಳು,ಚಿಂತನಾ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಕ್ಕಳ ವರ್ಕ್‌ಬುಕ್‌ಗಳು ಮಕ್ಕಳಿಗೆ ಚಟುವಟಿಕೆಗಳ ಮೂಲಕ ಕಲಿಕೆಗೆ ಪೂರಕವಾಗುತ್ತದೆ. ಅಕ್ಷರ ಬರವಣಿಗೆಯ ಅಭ್ಯಾಸ, ಬಣ್ಣ ತುಂಬುವಿಕೆ ಮುಂತಾದ ಚಟುವಟಿಕೆಗಳು ಮಕ್ಕಳ ಯೋಚನಾಶಕ್ತಿಯನ್ನು ಹೆಚ್ಚಿಸುತ್ತವೆ. ಈ ರೀತಿಯ ಪುಸ್ತಕಗಳು ಮಕ್ಕಳಿಗೆ ಕಲಿಕೆಯನ್ನು ಬೋರ್ ಆಗದಂತೆ ಚಟುವಟಿಕೆಯೊಂದಿಗೆ ಜ್ಞಾನವನ್ನು ನೀಡುತ್ತವೆ.

ಬೇಸಿಗೆ ರಜೆಯಲ್ಲಿ ಓದು ಮತ್ತು ಚಟುವಟಿಕೆಗಳ ಸಮತೋಲನ ಬಹಳ ಮುಖ್ಯ. ದಿನಕ್ಕೆ ಕನಿಷ್ಠ 20 ನಿಮಿಷ ಕಥೆ ಓದುವುದು ಮತ್ತು 20 ನಿಮಿಷ ವರ್ಕ್‌ಬುಕ್ ಚಟುವಟಿಕೆಗಳಿಗೆ ಸಮಯ ನೀಡುವುದರಿಂದ ಮಕ್ಕಳಲ್ಲಿ ಒಳ್ಳೆಯ ಅಭ್ಯಾಸ ಬೆಳೆಸಬಹುದು.

ವಸಂತ ಪ್ರಕಾಶನವು ಮಕ್ಕಳಿಗಾಗಿ ಕಥೆ ಪುಸ್ತಕಗಳು ಮತ್ತು ವರ್ಕ್‌ಬುಕ್‌ಗಳ ಅದ್ಭುತ ಸಂಗ್ರಹವನ್ನು ಹೊಂದಿದೆ. ರಾಮಾಯಣ ಕಥೆಗಳು, ನೈತಿಕ ಕಥೆಗಳು, ವರ್ಕ್‌ಬುಕ್‌ಗಳು ಸರಳ ಕನ್ನಡ ಮತ್ತು ಆಕರ್ಷಕ ವಿನ್ಯಾಸದಲ್ಲಿ ಲಭ್ಯವಿವೆ. ಈ ಪುಸ್ತಕಗಳು ಮಕ್ಕಳಿಗೆ ಓದುವ ಹವ್ಯಾಸ ಮತ್ತು ಕಲಿಕೆಗೆ ಪೂರಕವಾಗಿವೆ 

ಈ ಬೇಸಿಗೆಯಲ್ಲಿ ಮಕ್ಕಳಿಗೆ ಒಂದು ಉತ್ತಮ ಕಥೆ ಪುಸ್ತಕ ಮತ್ತು ವರ್ಕ್‌ಬುಕ್‌ನ್ನು ಉಡುಗೊರೆಯಾಗಿ ನೀಡಿ. ಈ ಪುಸ್ತಕಗಳು ಮಕ್ಕಳ ಭವಿಷ್ಯಕ್ಕೆ ಒಂದು ಉತ್ತಮ ದಾರಿಯಾಗಲಿ.

Kids reading books illustration with Kannada children’s books, stories, and educational books by Vasantha Prakashana

Encouraging children to spend a little time every day reading and engaging in fun activities can make a big difference. This summer, choose books that not only entertain but also educate and inspire young minds

Kids Story books and work books together create great learning experience. kids story books build imagination and emotional understanding, work books improve focus, creativity, and problem-solving skills.

Make this summer fun, creative and meaningful for your kids

Share :