A book is a dream you hold in your hands

ಕನ್ನಡ ಸಾಹಿತ್ಯ ಓದಲು ಆರಂಭಿಸಲು ಮೂರು ಉತ್ತಮ ಪುಸ್ತಕಗಳು

Best books for reading Kannada literature featuring classic and modern works

ಕನ್ನಡ ಸಾಹಿತ್ಯ ಓದೋಕೆ ಶುರು ಮಾಡಬೇಕು ಎಂದಿರುವ ಉತ್ಸಾಹಿ ಓದುಗರಿಗೆ ಸರಿಯಾದ ಪುಸ್ತಕದ ಆಯ್ಕೆ ಬಹಳ ಮುಖ್ಯ. ಸರಳ ಭಾಷೆ, ಆಸಕ್ತಿದಾಯಕ ಕಥಾಹಂದರ ಮತ್ತು ಮನಸ್ಸಿಗೆ ಹತ್ತಿರವಾಗುವ ವಿಷಯಗಳನ್ನು ಹೊಂದಿರುವ ಪುಸ್ತಕಗಳು ಓದುವ ಅಭ್ಯಾಸವನ್ನು ಬೆಳೆಸಲು ಸಹಾಯ ಮಾಡುತ್ತವೆ. ಕನ್ನಡ ಸಾಹಿತ್ಯದ ವಿಶಾಲ ಲೋಕಕ್ಕೆ ಮೊದಲ ಹೆಜ್ಜೆ ಇಡುವವರಿಗೆ ಸುಲಭವಾಗಿ ಓದಬಹುದಾದ ಮತ್ತು ವಿಭಿನ್ನ ಅನುಭವ ನೀಡುವ ಕೆಲವು ಉತ್ತಮ ಪುಸ್ತಕಗಳ ಪರಿಚಯ ಇಲ್ಲಿದೆ.

ಅಮ್ಮ ಹೇಳಿದ ಎಂಟು ಸುಳ್ಳುಗಳು – ಎ. ಆರ್. ಮಣಿಕಾಂತ್

ಎ. ಆರ್. ಮಣಿಕಾಂತ್ ಅವರ ಈ ಪುಸ್ತಕ ಅರ್ಥಪೂರ್ಣ ಲೇಖನ ಸಂಕಲನ. ಅಮ್ಮನ ಪ್ರೀತಿ, ತ್ಯಾಗ,ಸಂಬಂಧಗಳ ಮೌಲ್ಯ ಇವುಗಳನ್ನು ತುಂಬಾ ಸರಳವಾಗಿ ಮತ್ತು ಸ್ಪರ್ಶಿಸುವ ರೀತಿಯಲ್ಲಿ ಬರೆದಿದ್ದಾರೆ. ಈ ಪುಸ್ತಕದ ಪ್ರತಿ ಲೇಖನ ಓದುಗರಿಗೆ ಒಂದು ಪಾಠದಂತೆ ಅನಿಸುತ್ತದೆ.

ಸುಮಾರು160 ಪುಟಗಳ ಈ ಪುಸ್ತಕ ನಿಮ್ಮ ಮನಸ್ಸಿಗೆ ಹತ್ತಿರವಾಗುವ ಮತ್ತು ಆಲೋಚನೆಗಳನ್ನು ಪ್ರೇರೇಪಿಸುವ ಕೃತಿ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ ಲಕ್ಷಾಂತರ ಓದುಗರ ನೆಚ್ಚಿನ ಪುಸ್ತಕವಾಗಿದೆ.

Vasantha Prakashana Kannada books and educational publications for all age groups
ತಮಿಳು ತಲೆಗಳ ನಡುವೆ – ಡಾ. ಬಿ. ಜಿ. ಎಲ್. ಸ್ವಾಮಿ

“ತಮಿಳು ತಲೆಗಳ ನಡುವೆ” ಕೃತಿ ಲೇಖಕರು ತಮಿಳುನಾಡಿನಲ್ಲಿ ಕಳೆದ ತಮ್ಮ ಅನುಭವಗಳ ಆಧಾರಿತವಾಗಿದೆ. ಅನ್ಯಭಾಷೆಯ ನಡುವೆ ಬದುಕುವಾಗ ಎದುರಾಗುವ ಸವಾಲುಗಳನ್ನು ಹಾಸ್ಯಭರಿತವಾಗಿ ಚಿತ್ರಿಸಿರುವ ಈ ಪುಸ್ತಕ ಓದುಗರನ್ನು ಒಂದೇ ಸಮಯದಲ್ಲಿ ನಗಿಸುವುದರ ಜೊತೆಗೆ ಚಿಂತನೆಗೂ ಪ್ರೇರೇಪಿಸುತ್ತದೆ. ಸುಮಾರು 200 ಪುಟಗಳ ಈ ಕೃತಿ ಎರಡು ರಾಜ್ಯಗಳ ಸಂಸ್ಕೃತಿ ಮತ್ತು ಭಾಷೆಯ ವೈವಿಧ್ಯತೆಯನ್ನು ಪರಿಚಯಿಸುತ್ತದೆ. ಸರಳ ಶೈಲಿ ಮತ್ತು ಮನರಂಜನೀಯ ನಿರೂಪಣೆ ಈ ಪುಸ್ತಕವನ್ನು ಆರಂಭಿಕ ಓದುಗರಿಗೆ ಇನ್ನಷ್ಟು ಸೂಕ್ತವಾಗಿಸುತ್ತದೆ.

Tamilu Talegala Naduve | Vasantha Prakashana
ಮಿಡಿದ ಶೃತಿ - ಸಾಯಿಸುತೆ

ಈ ಕಾದಂಬರಿ ಸಂಬಂಧಗಳು ಮತ್ತು ಭಾವನೆಗಳ ಸುತ್ತ ಸಾಗುವ ಕಥೆ. ಪ್ರೀತಿ, ಆಯ್ಕೆಗಳು ಮತ್ತು ಮನಸ್ಸಿನ ಸೂಕ್ಷ್ಮತೆಗಳನ್ನು ಸರಳವಾಗಿ ವ್ಯಕ್ತಪಡಿಸಿರುವುದು ಈ ಪುಸ್ತಕದ ವಿಶೇಷತೆ.ಬಾಲು ಮತ್ತು ಸುಜಾತಾ ಎಂಬ ಇಬ್ಬರು ಪ್ರೇಮಿಗಳು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಕುಟುಂಬ ಮತ್ತು ಸಮಾಜದ ಸಂಕಷ್ಟಗಳ ನಡುವೆ ನಡೆಸುವ ಹೋರಾಟದ ಕಥೆ ‘ಮಿಡಿದ ಶೃತಿ’.ಸುಮಾರು 200ಕ್ಕೂ ಹೆಚ್ಚು ಪುಟಗಳ ಈ ಕಾದಂಬರಿ ಆಳವಾದ ಮತ್ತು ಮನಸಿಗೆ ತಾಕುವ ಓದು.

ಅಪಾರವಾದ ಜನಪ್ರಿಯತೆಯಿಂದಾಗಿ,1992 ರಲ್ಲಿ ‘ಮಿಡಿದ ಶೃತಿ’ ಎಂಬ ಅದೇ ಹೆಸರಿನಲ್ಲಿ ಚಲನಚಿತ್ರವಾಗಿ ಕೂಡ ಮೂಡಿಬಂತು. ಈ ಚಿತ್ರದಲ್ಲಿ ಶಿವರಾಜಕುಮಾರ್ ಮತ್ತು ಸುಧಾರಾಣಿ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.ಈ ಸಿನಿಮಾ ಕೂಡ ಕಾದಂಬರಿಯಷ್ಟೇ ದೊಡ್ಡ ಯಶಸ್ಸನ್ನು ಕಂಡಿತ್ತು.

Midida Shruthi by Saisuthe book featuring engaging Kannada literary content

ಕನ್ನಡ ಸಾಹಿತ್ಯ ಓದುವ ಪಯಣವನ್ನು ಆರಂಭಿಸಲು ಈ ರೀತಿಯ ಸರಳ ಮತ್ತು ಆಸಕ್ತಿದಾಯಕ ಪುಸ್ತಕಗಳು ಅತ್ಯುತ್ತಮ ಆಯ್ಕೆ. ಇವು ಓದುವ ಆಸಕ್ತಿಯನ್ನು ಬೆಳೆಸುವುದರ ಜೊತೆಗೆ ಭಾಷೆಯ ಮೇಲಿನ ಪ್ರೀತಿಯನ್ನು ಹೆಚ್ಚಿಸುತ್ತವೆ. ಸರಿಯಾದ ಪುಸ್ತಕದಿಂದ ಆರಂಭಿಸಿದರೆ ಓದು ಸುಂದರ ಅಭ್ಯಾಸವಾಗಿ ಬೆಳೆಯುತ್ತದೆ.

If you are planning to start reading Kannada, choosing beginner-friendly books is important. Easy-to-read Kannada books like Amma helida entu sullugalu will offer emotional and self reflection thoughts while Tamilu Talegala Naduve brings humor and cultural experiences and books like Mididha Shruthi will introduce readers to soulful characters and meaningful storytelling.

These are some of the best Kannada books for bennigers including light Kannada motivational books and engaging reads that help build a strong reading habit. Starting with such books makes exploring Kannada literature simple and enjoyable.

Share :