ಆಡಿಸಿದಳು ಜಗದೋಧರನ
Aadisidalu Jagadodharana

₹170.00

Author: Saisuthe

 

ತಮ್ಮ ಅವಿವೇಕದಿಂದ ಬದುಕನ್ನು ಕೈಯಾರೆ ಹಾಳುಮಾಡಿಕೊಳ್ಳುವ ಕೆಲವರನ್ನು ನೋಡಿದರೆ ಅನುಕಂಪ ಮೂಡುತ್ತದೆ. ಅವರನ್ನು ಇತರರು ತಿದ್ದಲು ಸಾಧ್ಯವೇ ಇಲ್ಲ. ಎಷ್ಟೇ ತಿಳಿಹೇಳಿದರೂ, ಅವರು ತಿದ್ದಿಕೊಳ್ಳಲಾರರು. ಅವರ ಹಠದಿಂದ ಸಂಪೂರ್ಣ ಕುಟುಂಬದ ಸುಖಸಂತೋಷಗಳು ಮಣ್ಣುಪಾಲಾಗುವುದು ನಿಜವಾದ ದುರಂತ.

ಇಂಥ ವ್ಯಕ್ತಿತ್ವದ ’ಶಶಿ’ ಎಂಬ ಪಾತ್ರವನ್ನು ಸೃಷ್ಟಿಸಿ ’ಆಡಿಸಿದಳು ಜಗದೋದ್ಧಾರನ’ ಕಾದಂಬರಿ ರಚಿಸಿದ್ದಾರೆ ಸಾಯಿಸುತೆ. ವಿಶ್ವ-ಶಶಿಯರದು ಹಿರಿಯರು ಮಾಡುವ ಮದುವೆ. ಮದುಮಗನಾದ ಕೆಲವೇ ದಿನಗಳಲ್ಲಿ ಶಶಿಯ ದುರ್ಗುಣದ ಅರಿವಾಗಿ ಅವಳನ್ನು ತಿದ್ದಲು ಪ್ರಯತ್ನಿಸುತ್ತಾನೆ. ಆದರೆ ಶಶಿ ಗಂಡನ ಮಾತಿಗೂ ಬೆಲೆ ಕೊಡುವುದಿಲ್ಲ. ಅತ್ತೆ ಮಾವಂದಿರಿಗೂ ನೋವು ಕೊಟ್ಟು ಕೊನೆಗೆ ಹಡೆದ ಮಗುವನ್ನು ಬಿಟ್ಟುಹೋದವಳು ಶಶಿ.

ಇಂಥ ಅನಾಥ ಮಗುವನ್ನು ಯಶೋದೆಯಾಗಿ ಪಾಲಿಸಿದ ಸುಶೀಲರ ಪಾತ್ರವೇ ಮುಂದಿನ ಕಥೆಯನ್ನು ನಡೆಸುತ್ತದೆ. ಶಶಿಯಂಥ ಪಾತ್ರ ಈ ಜಗತ್ತಿಗೆ ಬೇಕಿಲ್ಲ ಎನ್ನುವುದು ಜಗತ್ತಿಗೆ ಕಾದಂಬರಿಯ ಸಂದೇಶ. ಯಾರ ಮನಸ್ಸಿನಲ್ಲಾದರೂ ಶಶಿಗೆ ಇದ್ದಂಥ ಭಾವನೆಗಳಿದ್ದರೆ ಕಾದಂಬರಿ ಓದಿದಮೇಲಾದರೂ ಅವರು ತಮ್ಮನ್ನು ತಾವು ಬದಲಾಯಿಸಿಕೊಂಡರೆ ಲೇಖಕಿಯ ಶ್ರಮ ಸಾರ್ಥಕ.

Description

Aadidalu Jagadoddharana is a meaningful Kannada novel by Saisuthe that explores the consequences of stubbornness, poor judgment, and destructive behaviour within family life. The story centres on Shashi, a woman whose unhealthy attitudes and decisions gradually bring suffering to her husband Vishw, her in-laws, and eventually her own child. Despite repeated efforts to change her, she refuses to listen and ultimately leaves behind the child she has given birth to.

The story takes a deeper emotional turn through Sushila, who lovingly cares for the abandoned child and becomes a motherly presence in the child’s life. Through these characters, the novel highlights the importance of family values, responsibility, self-correction, and compassion. Its central message encourages readers to recognise harmful attitudes within themselves and make positive changes in life.

A thoughtful choice for readers interested in Kannada novels, family-based stories, social novels, women centric literature, emotional fiction, and Kannada books from Vasantha Prakashana.

Reviews

There are no reviews yet.

Be the first to review “ಆಡಿಸಿದಳು ಜಗದೋಧರನ
Aadisidalu Jagadodharana”

Your email address will not be published. Required fields are marked *