ಕಥೆಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ ಅವು ಸಮಾಜದ ಮೌನ ಸ್ವರಗಳಿಗೆ ಧ್ವನಿಯಾಗಿವೆ. ಸಮಾಜದ ವಾಸ್ತವಿಕತೆಗೆ ಸಾಹಿತ್ಯದ ರೂಪ ನೀಡಿದ ಖ್ಯಾತ ಕಥೆಗಾರ ಅಮರೇಶ್ ನುಗಡೋಣಿ ಅವರಿಗೆ 2025 ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಹೆಮ್ಮೆಯ ಸಂಗತಿ.ದೇಶದ ವಿವಿಧ ಭಾಷೆಗಳಲ್ಲಿನ ಶ್ರೇಷ್ಠ ಕೃತಿಗಳಿಗೆ ನೀಡಲಾಗುವ ಈ ಗೌರವ ಸಂದಿರುವುದು ಮಹತ್ತರ ಸಾಧನೆ.
ಈ ಪ್ರಶಸ್ತಿ ಇವರ ‘ದಡ ಸೇರಿಸು ತಂದೆ’ ಎಂಬ ಕಥಾಸಂಕಲನಕ್ಕೆ ಲಭಿಸಿದೆ.ಇದು ನೈಜ ಜೀವನದ ಅನುಭವಗಳಿಗೆ ಸಾಹಿತ್ಯದ ಸ್ವರೂಪ ನೀಡಿ,ಅವುಗಳನ್ನು ಸಮಾಜದ ಮುನ್ನೆಲೆಗೆ ತರುವ ಮಹತ್ವದ ಕೃತಿ. ಒಟ್ಟು ಎಂಟು ಕಥೆಗಳನ್ನು ಒಳಗೊಂಡ ಈ ಸಂಕಲನ ಸಮಕಾಲೀನ ಸಮಾಜದ ಗಾಢ ವಾಸ್ತವಿಕತೆಯನ್ನು ಅನಾವರಣಗೊಳಿಸುವ ಕೃತಿಯಾಗಿದೆ.
ಅಮರೇಶ್ ನುಗಡೋಣಿ ಅವರ ಬರವಣಿಗೆ ಗ್ರಾಮೀಣ ಬದುಕಿನ ನಿಜಸ್ವರೂಪವನ್ನು ಕಣ್ಣಿಗೆ ಕಟ್ಟುವಂತೆ ಮೂಡಿಸುತ್ತದೆ. ಜಾತಿ ವ್ಯವಸ್ಥೆ, ಸಾಮಾಜಿಕ ಅಸಮಾನತೆ, ಸಂಬಂಧಗಳ ಸೂಕ್ಷ್ಮತೆ, ಬದುಕಿನ ಅನಿವಾರ್ಯ ಸತ್ಯಗಳ ಸುತ್ತ ಹೆಣೆದಿರುವ ಇವರ ಕಥೆಗಳು ಸಮಾಜದ ವಾಸ್ತವಿಕತೆಗೆ ಹಿಡಿದ ಕನ್ನಡಿಯಾಗಿವೆ.
ಪ್ರಾದೇಶಿಕ ಭಾಷಾಶೈಲಿಯಲ್ಲಿ ಮೂಡಿ ಬರುವ ಇವರ ಬರವಣಿಗೆ ಇನ್ನಷ್ಟು ನೈಜತೆಯನ್ನು ಪಡೆದುಕೊಳ್ಳುತ್ತದೆ .
ಸವಾರಿ – ವಸಂತ ಪ್ರಕಾಶನದ ಹೆಮ್ಮೆಯ ಹೆಜ್ಜೆ
ಅಮರೇಶ್ ನುಗಡೋಣಿ ಅವರ ಪ್ರಮುಖ ಕೃತಿಗಳಲ್ಲೊಂದು ನಮ್ಮ ವಸಂತ ಪ್ರಕಾಶನದಿಂದ ಪ್ರಕಟಗೊಂಡ ‘ಸವಾರಿ’. ಈ ಕೃತಿಯಲ್ಲಿನ ಶೀರ್ಷಿಕೆ ಕಥೆ ‘ಸವಾರಿ’ ಆಧಾರದ ಮೇಲೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನ್ನಡ ಚಲನಚಿತ್ರ ‘ಕನಸೆಂಬೋ ಕುಡುರೆಯನೇರಿ’ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.
ಸವಾರಿ ಕೃತಿ ಭಾವನಾತ್ಮಕ ಆಳ, ನೆಲದ ಸುವಾಸನೆ, ಮತ್ತು ಸಾಮಾಜಿಕ ಅರಿವುಗಳ ಸಮ್ಮಿಶ್ರಣ. ಇಂತಹ ಕೃತಿಗಳನ್ನು ಓದುಗರಿಗೆ ತಲುಪಿಸುವಲ್ಲಿ ವಸಂತ ಪ್ರಕಾಶನ ಮುಂಚೂಣಿಯಲ್ಲಿದೆ. ನಮ್ಮ ಹೆಮ್ಮಯ ಲೇಖಕರು,ಅಮರೇಶ ನುಗದೋಣಿ ಅವರ ಪ್ರಾದೇಶಿಕ ಕಥೆಗಳಿಗೆ ರಾಷ್ಟ್ರಮಟ್ಟದ ಗೌರವ ಸಂದಿರುವುದು ನಮಗೆ ಹೆಮ್ಮೆಯ ಕ್ಷಣ.
ಈ ಮಹತ್ತರ ಸಾಧನೆಗಾಗಿ ವಸಂತ ಪ್ರಕಾಶನದಿಂದ ಅಮರೇಶ್ ನುಗಡೋಣಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇವರ ಲೇಖನಯಾನ ಹೊಸ ಕಥೆಗಳು, ಹೊಸ ಚಿಂತನೆಗಳು, ಹೊಸ ಸ್ಫೂರ್ತಿಗಳೊಂದಿಗೆ ಇನ್ನಷ್ಟು ಪ್ರಭಾವಶಾಲಿಯಾಗಿ ಮುಂದುವರಿಯಲಿ ಎಂದು ಆಶಿಸುತ್ತೇವೆ.
ನಮ್ಮ ವಸಂತ ಪ್ರಕಾಶನ ಪ್ರಕಟಿಸಿರುವ ‘ಸವಾರಿ’ ಕೃತಿಯನ್ನು ಇಂದೇ ಕೈಗೆತ್ತಿಕೊಳ್ಳಿ. ಇದರ ಒಂದು ಕಥೆ ನಿಮಗೆ ಬದುಕಿನ ಅನೇಕ ಸತ್ಯಗಳನ್ನು ಪರಿಚಯಿಸುತ್ತದೆ.ಇಂತಹ ಅದ್ಭುತ ಕನ್ನಡ ಸಾಹಿತ್ಯವನ್ನು ಓದಿ, ಅರಿತು, ಪ್ರೋತ್ಸಾಹಿಸೋಣ.
Heartfelt congratulations to Amaresh Nugadoni on winning the Sahitya Akademi Award 2025 for ‘Dada Seerisu Tande’, a landmark in contemporary Kannada literature. Celebrated for his powerful portrayal of rural life, caste dynamics, and social justice in the Kalyan Karnataka region, his storytelling continues to shape regional narratives. His notable work Saavari, published by Vasantha Prakashana. stands as a testament to his literary depth and cultural authenticity, marking a proud moment for Kannada storytelling on the national stage. Four of his stories have been adapted as cinemas and have gained national reach.
Discover the power of authentic storytelling through ‘Saavari’. Celebrate Kannada literature by exploring voices like Amaresh Nugadoni and publications by Vasantha Prakashana.
Order your copy today from Vasantha Prakashana. Start reading, share the stories, and be part of preserving meaningful regional narratives.





