ಮಕ್ಕಳ ಮನಸ್ಸು ಮೃದುವಾದ ಮಣ್ಣಿನಂತೆ. ಮುಗ್ಧ ಮನಸ್ಸಿನಲ್ಲಿ ನಾವು ಯಾವ ಕಥೆಗಳನ್ನು ಬಿತ್ತುತ್ತೇವೋ, ಆ ಕಥೆಗಳೇ ಅವರ ಚಿಂತನೆ ಮತ್ತು ವ್ಯಕ್ತಿತ್ವವಾಗಿ ಬೆಳೆಯುತ್ತವೆ. ಹೀಗಾಗಿ ಮಕ್ಕಳಿಗೆ ಮಹಾಭಾರತವನ್ನು ಪರಿಚಯಿಸುವುದು ಬಹಳ ಮುಖ್ಯ.
ಮಹಾಭಾರತ ಕೇವಲ ಯುದ್ಧದ ಕಥೆಯಲ್ಲ ಅದು ಜೀವನವನ್ನು ಅರಿಯುವ ಪಾಠಗಳನ್ನು ಸಾರುವ ಮಹಾಗ್ರಂಥ. ಪಾಂಡವರು ಮತ್ತು ಕೌರವರ ಕಥೆಯ ಮೂಲಕ ಸತ್ಯ, ಧರ್ಮ, ಸ್ನೇಹ, ಧೈರ್ಯ, ತಾಳ್ಮೆ ಮತ್ತು ಜವಾಬ್ದಾರಿತ್ವದ ಮೌಲ್ಯಗಳನ್ನು ಮಕ್ಕಳಿಗೆ ಸರಳವಾಗಿ ತಿಳಿಸಬಹುದು.ಯುಧಿಷ್ಠಿರನ ಸತ್ಯನಿಷ್ಠೆ, ಅರ್ಜುನನ ಏಕಾಗ್ರತೆ, ಭೀಮನ ಶೌರ್ಯ ಇವು ಮಕ್ಕಳಿಗೆ ಆದರ್ಶ ವ್ಯಕ್ತಿತ್ವದ ಮಾದರಿಗಳಾಗುತ್ತವೆ. ಮಹಾಭಾರತದ ಮೂಲಕ ಒಳ್ಳೆಯದು–ಕೆಟ್ಟದ್ದು ಎನ್ನುವ ಭೇದವನ್ನು ಮಕ್ಕಳು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ.
ಮಹಾಭಾರತ ಮಹಾಕಾವ್ಯ ಸಂಬಂಧಗಳ ಮಹತ್ವವನ್ನು ಮನದಟ್ಟು ಮಾಡುತ್ತದೆ. ಅಣ್ಣ–ತಮ್ಮಂದಿರ ಬಾಂಧವ್ಯ, ಗುರು–ಶಿಷ್ಯರ ಗೌರವ, ಸ್ನೇಹದ ನಿಷ್ಠೆ – ಇವುಗಳೆಲ್ಲ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ. ಪೌರಾಣಿಕ ಕಥೆಗಳ ರೋಚಕ ಘಟನೆಗಳು ಮಕ್ಕಳ ಕಲ್ಪನಾ ಶಕ್ತಿಯನ್ನು ಹೆಚ್ಚಿಸಿ ಓದುವ ಆಸಕ್ತಿಯನ್ನು ವೃದ್ಧಿಸುತ್ತವೆ.
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಗೇಮ್‌ಗಳ ನಡುವೆ ಬೆಳೆಯುವ ಮಕ್ಕಳಿಗೆ ಇಂತಹ ಜೀವನ ಮೌಲ್ಯಗಳ ಕಥೆಗಳು ಅತ್ಯಗತ್ಯವಾಗಿದೆ.ಮಹಾಭಾರತ ಓದುವುದರಿಂದ ಮಕ್ಕಳಲ್ಲಿ ಬುದ್ಧಿಶಕ್ತಿ, ಏಕಾಗ್ರತೆ,ನೆನಪಿನ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ಎಳೆಯ ವಯಸ್ಸಿನಲ್ಲಿ ಮಾನಸಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ.ಪ್ರತಿ ಮನೆಯಲ್ಲೂ ಮಹಾಭಾರತದ ಪುಸ್ತಕ ಇರಬೇಕು. ಮನೆಯ ಮಕ್ಕಳು ಈ ಮಹಾಕಾವ್ಯವನ್ನು ಓದಬೇಕು.
ನಿಮ್ಮ ಮಕ್ಕಳಿಗಾಗಿ ಸರಳ ಭಾಷೆಯಲ್ಲಿ, ಆಕರ್ಷಕ ಚಿತ್ರಗಳೊಂದಿಗೆ ಪ್ರಕಟವಾದ ಮಹಾಭಾರತ ಪುಸ್ತಕವನ್ನು ವಸಂತ ಪ್ರಕಾಶನ ಪ್ರಕಟಿಸಿದೆ. ಈ ಪುಸ್ತಕ ಪ್ರತಿ ಪುಟದಲ್ಲೂ ಮಹಾಭಾರತದ ಸಾಹಸ, ತಂತ್ರ ಮತ್ತು ಜ್ಞಾನದ ಸಂಗತಿಗಳನ್ನು ಒಳಗೊಂಡಿದೆ. 9 ರಿಂದ 12 ವಯೋಮಿತಿಯ ಮಕ್ಕಳ ಮೌಲ್ಯಯುತ ವಿಕಾಸಕ್ಕೆ ಈ ಮಹಾಭಾರತ ಪುಸ್ತಕ ಉತ್ತಮ ಆಯ್ಕೆ.
ನಿಮ್ಮ ಮಕ್ಕಳಿಗೆ ಧರ್ಮ, ಜ್ಞಾನ ಮತ್ತು ಮೌಲ್ಯಗಳನ್ನು ಸಾರುವ ಮಹಾಭಾರತ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ವಸಂತ ಪ್ರಕಾಶನದ ಮೂಲಕ ಇಂದೇ ಖರೀದಿಸಿ
Introduce your child to the epic Mahabharata. This Mahabharata for children is filled of life lessons and moral values. This ancient Indian mythological tale teaches kids about truth, courage, friendship, and responsibility through engaging stories and characters . It also enhances cognitive skills and concentration, boosts self-confidence and moral values.
Get the beautifully illustrated Mahabharatha story book from Vasant Prakashana


