ವಸುಂಧರ
Vasundhara

₹90.00

Author: Saisuthe

 

ಸಹನೆಗೆ ಇನ್ನೊಂದು ಹೆಸರು ವಸುಂಧರ (ವಸುಂಧರ ಎಂದರೆ ಭೂಮಿ ಎಂದರ್ಥ) ’ವಸುಂಧರ’ ಸಾಯಿಸುತೆಯವರ ಸರಳ-ಸುಂದರ ಕಾದಂಬರಿ. ಕಥಾನಾಯಕಿ ವಸುಂಧರೆಯ ತಾಯಿ ಲಲಿತ ವೈವಾಹಿಕ ಸಂಬಂಧವನ್ನು ತ್ಯಜಿಸಿ ಹೋಗಿದ್ದಾಳೆ. ಬಳಿಕ ತಾಯಿಯೂ ಆಗಿ ವಸುಂಧರೆಯನ್ನು ಪೋಷಿಸಿದ ತಂದೆ ಸೀತಾರಾಮಯ್ಯನವರ ಅಕಾಲ ಮರಣದ ನಂತರ ಅವರ ಸ್ನೇಹಿತ ಶ್ಯಾಮರಾಯರು ತಂದೆಯ ಸ್ಥಾನ ತುಂಬಿ ವಸುಂಧರೆಯನ್ನು ನೋಡಿಕೊಳ್ಳುತ್ತಾರೆ. ಮಗಳನ್ನು ತೊರೆದು ಹೋದ ಲಲಿತೆಗೆ ೨ನೇ ಮದುವೆಯೂ ಮಕ್ಕಳ ಭಾಗ್ಯವನ್ನು ನಿರಾಕರಿಸಿದಾಗ ತನ್ನ ಮೊದಲ ಪತಿಯಿಂದ ಜನಿಸಿದ್ದ ವಸುಂಧರಳನ್ನು ಬಯಸಿ ಬಂದ ಲಲಿತಾಳನ್ನು ’ತಾಯಿ’ಎಂದು ಒಪ್ಪಲು ವಸುಂಧರ ನಿರಾಕರಿಸುತ್ತಾಳೆ. ಶ್ಯಾಮರಾಯರ ಮಗ ಶೇಖರನಿಗೆ ವಸುಂಧರಳ ಮೇಲೆ ಆಕರ್ಷಣೆ. ಶೇಖರನಿಗೆ ತನ್ನ ಮಗಳು ರೇಖಾಳನ್ನು ಕೊಟ್ಟು ಮದುವೆ ಮಾಡಬೇಕೆಂಬುದು ರೇಖಾಳ ತಂದೆ-ತಾಯಿಯ ಯೋಚನೆ. ಅವರ ಯೋಚನೆ ಫಲಿಸಿತೆ? ಶೇಖರ ಮದುವೆ ಆದದ್ದು ಯಾರನ್ನು? ವಸುಂಧರಳ ಭವಿಷ್ಯ ಏನಾಯಿತು? ಇತ್ಯಾದಿ ಕುತೂಹಲ ಕೆರಳಿಸುತ್ತಾ ಸೊಗಸಾಗಿ ಹರಿಯುವ ಕಥಾಪ್ರವಾಹ ವಸುಂಧರ ಕಾದಂಬರಿಯಲ್ಲಿದೆ.

Description

Vasundhara is a graceful and emotionally engaging Kannada novel by Saisuthe, centred on patience, motherhood, family relationships, and the unexpected turns of life. The name Vasundhara, meaning “Earth,” reflects the patience and resilience of the protagonist.

After her mother Lalitha abandons her marriage, Vasundhara is raised with love and care by her father Seetharamaiah. Following his untimely death, his close friend Shyamaraya takes on the role of a father and continues to support her. When Lalitha, whose second marriage leaves her without children, returns seeking a relationship with Vasundhara, she refuses to accept her as her mother after years of separation.

Meanwhile, Shekhar, Shyamaraya’s son, develops feelings for Vasundhara, while another family hopes to arrange his marriage with Rekha. These contrasting relationships create emotional conflicts and unexpected turns in the story.

Who will Shekhar marry? What will become of Vasundhara’s future? The answers unfold through the engaging narrative of Vasundhara.

A meaningful choice for readers interested in Kannada novels, family novels, emotional fiction, women-centric literature, relationship stories, Saisuthe novels, and Kannada books from Vasantha Prakashana.

Reviews

There are no reviews yet.

Be the first to review “ವಸುಂಧರ
Vasundhara”

Your email address will not be published. Required fields are marked *