ಇಂದ್ರ ಧನಸ್ಸು
Indra Dhanassu

₹78.00

Author: Saisuthe

 

’ಇಂದ್ರಧನಸ್ಸು’ಕಾದಂಬರಿ ಸಾಯಿಸುತೆಯವರ ಒಂದು ಉತ್ಕೃಷ್ಟ ಕಾದಂಬರಿ. ಇದರ ಕೇಂದ್ರಪಾತ್ರ ಪುರುಷೋತ್ತಮ ಒಂದು ಅಪೂರ್ವ ಪಾತ್ರ. ಪುರುಷೋತ್ತಮ ಒಬ್ಬರು ಖ್ಯಾತ ವಕೀಲರು. ಸವಾಲಾಗುವಂಥ ಕೇಸುಗಳನ್ನು ತೆಗೆದುಕೊಂಡು ಗೆದ್ದವರು. ಅವರ ಬಳಿ ಜೂನಿಯರ್‌ಗಳಾಗಿ ವೃತ್ತಿಯಲ್ಲಿ ಪಳಗಿದವರು ನಂತರ ಸ್ವತಂತ್ರವಾಗಿ ವೃತ್ತಿ ನಿರ್ವಹಿಸಿ ಶ್ರೀಮಂತರಾಗಿದ್ದರು. ಆದರೆ ಪುರುಷೋತ್ತಮ ಮಾನವೀಯ ಮೌಲ್ಯಗಳಿಗೆ ನೀಡಿದ ಬೆಲೆಯನ್ನು ಹಣಕ್ಕೆ ಕೊಟ್ಟಿರಲಿಲ್ಲ. ಇದು ಅವರ ಮಕ್ಕಳ ಪೈಕಿ ಸೂರ್ಯನ ಹೊರತಾಗಿ ಉಳಿದವರ ಅಸಮಾಧಾನಕ್ಕೆ ಕಾರಣವಾಗಿತ್ತು. ವರದಕ್ಷಿಣೆಯ ಕುರಿತಾದ ಅವರ ನಿಲುವು ಪ್ರಮುಖ ಕಾರಣವಾಗಿ ಅವರ ಮಗಳು ಜಲಜಾಳ ಮದುವೆ ಆಗಿರಲಿಲ್ಲ.

ಒಂದು ದಿನ ಪುರುಷೋತ್ತಮರ ಬಳಿಗೆ ವಿಚಿತ್ರ ಪ್ರಕರಣವೊಂದು ಬರುತ್ತದೆ. ತಂದೆ ತಾಯಿ ತನಗೆ ಸರಿಯಾದ ವಯಸ್ಸಿನಲ್ಲಿ ಮದುವೆ ಮಾಡಿಲ್ಲ ಎಂಬ ಆರೋಪದೊಂದಿಗೆ ನ್ಯಾಯ ಕೇಳಲು ಹೆಣ್ಣುಮಗಳೊಬ್ಬಳು ಬಂದಾಗ ತನ್ನ ಮಗಳೂ ಇದೇ ರೀತಿ ಯೋಚಿಸಬಹುದಲ್ಲವಾ ಎಂದು ಪುರುಷೋತ್ತಮ ತಳಮಳಿಸುತ್ತಿದ್ದರು. ಆಗ ಸೂರ್ಯನು ಸೂಕ್ತ ಉತ್ತರದಿಂದ ಅವರ ಮನಸ್ಸಿಗೆ ನೆಮ್ಮದಿ ನೀಡುತ್ತಾನೆ.

ಸೂರ್ಯ ’ಇಂದ್ರಧನಸ್ಸು’ ಎಸ್ಟೇಟಿನ ಮೇಲ್ವಿಚಾರಕನಾಗಿ ಸೇರಿಕೊಂಡದ್ದು ಕಾದಂಬರಿಯಲ್ಲಿ ಪ್ರಮುಖ ತಿರುವು. ಈ ಹುದ್ದೆಗೆ ಅಪಾಯಿಂಟ್ ಆದ ಇಬ್ಬರು ಹೇಳದೆ ಕೇಳದೆ ನಾಪತ್ತೆ ಆಗಿದ್ದರೆ, ಒಬ್ಬ ಮ್ಯಾನೇಜರ್ ಸತ್ತು, ಇನ್ನೊಬ್ಬ ಮಾಯವಾಗಿದ್ದ. ಸೂರ್ಯನ ಆಗಮನ ಎಸ್ಟೇಟ್ ಒಡತಿ ರಮ್ಯಾಳ ಅಸಮಾಧಾನಕ್ಕೆ ಕಾರಣವಾಗಿದ್ದರೆ ಅಲ್ಲಿ ಕೆಲಸಕ್ಕೆ ಸೇರಬಾರದೆಂದು ಅನಾಮಿಕರು ಪತ್ರಗಳ ಮೂಲಕ ಸೂರ್ಯನಿಗೆ ಬೆದರಿಕೆ ಹಾಕಿದ್ದರು.

ಇಂದ್ರಧನಸ್ಸು ಎಸ್ಟೇಟ್ ಹಿಂದಿನ ನಿಗೂಢತೆ ಏನು? ಅದನ್ನು ಸೂರ್ಯ ಹೇಗೆ ಭೇದಿಸಿದ? ಸೂರ್ಯ ಎಸ್ಟೇಟಿಗೆ ಬರುವುದು ರಮ್ಯಾಳಿಗೆ ಇಷ್ಟವಿಲ್ಲದಿದ್ದದ್ದು ಯಾಕೆ? ಎಸ್ಟೇಟಿನ ಅವ್ಯವಹಾರವನ್ನು ಸೂರ್ಯ ಸರಿಪಡಿಸಿದ ಬಗೆ ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಕುತೂಹಲಕಾರಿಯಾಗಿ ಉತ್ತರಿಸುತ್ತಾ ಸಾಗುವ ಕಥೆ ಇಂದ್ರಧನಸ್ಸು.

Description

Indradhanassu is an engaging Kannada novel by Saisuthe that combines family values, human relationships, mystery, and suspense. The central character, Purushottama, is a renowned lawyer who is highly respected for winning challenging cases. Although many of his former juniors become wealthy and successful, Purushottama chooses human values and principles over money, creating differences within his family. His firm stand against dowry also becomes a reason why his daughter Jalaja remains unmarried.

The story takes an intriguing turn when a young woman approaches Purushottama seeking justice, claiming that her parents failed to arrange her marriage at the right age. This makes him question whether his own daughter might one day feel the same way. Meanwhile, his son Surya becomes the manager of the mysterious Indradhanassu Estate, where previous managers have disappeared and suspicious incidents surround the property.

Surya receives anonymous threats warning him not to take up the position, while estate owner Ramya is unhappy about his arrival. As Surya investigates, he begins uncovering the hidden secrets, irregularities, and mysteries surrounding the estate.

A captivating choice for readers who enjoy Kannada novels, suspense novels, mystery fiction, family stories, social novels, and Saisuthe novels. This intriguing work is a valuable addition to collections of Kannada books and Kannada literature from Vasantha Prakashana.

Reviews

There are no reviews yet.

Be the first to review “ಇಂದ್ರ ಧನಸ್ಸು
Indra Dhanassu”

Your email address will not be published. Required fields are marked *