ಅಪೂರ್ವ ಮೈತ್ರಿ
Apoorva Maithri

₹125.00

Shop Now:
Buy on AmazonBuy on MeeshoBuy on Flipkart

Author: Saisuthe

 

ಹರೆಯದಲ್ಲಿ ಆಕರ್ಷಣೆ ಸಹಜ. ಮುಂದಾಲೋಚನೆ ಇಲ್ಲದೆ ತಪ್ಪು ಹೆಜ್ಜೆ ಇಟ್ಟರೆ, ಅದರ ಪರಿಣಾಮ ಭೀಕರವಾಗಿರುತ್ತದೆ ಎಂಬ ಅರಿವನ್ನು ಆಧರಿಸಿ ಸಾಯಿಸುತೆ ರಚಿಸಿದ ಕಾದಂಬರಿ ‘ಅಪೂರ್ವಮೈತ್ರಿ’.

ನಿಖಿಲ್‍ನ ಪ್ರೇಮದ ಬಲೆಯಲ್ಲಿ ಬಿದ್ದ ಶಾರದಾ ತಪ್ಪು ಹೆಜ್ಜೆ ಇಡುತ್ತಾಳೆ. ಪರಿಣಾಮವಾಗಿ ಮದುವೆಗೆ ಮೊದಲೇ ಗರ್ಭವತಿಯಾಗುತ್ತಾಳೆ. ಶಾರದಾಳ ಅಣ್ಣ ಕುಮಾರ್ ಅಬಾರ್ಷನ್ ಮಾಡುವಂತೆ ಸಲಹೆ ಮಾಡಿದರೆ ಅಪ್ಪ ರಾಮಮೂರ್ತಿ ಭ್ರೂಣಹತ್ಯೆ ಮಹಾಪಾಪ ಎಂದು ಗರ್ಭ ಉಳಿಸಿಕೊಳ್ಳುವಂತೆ ಹೇಳುತ್ತಾರೆ. ಶಾರದಾ ಪ್ರಸವಿಸಿ ಮಗನಿಗೆ ಕಿರಣ್ ಎಂದು ನಾಮಕರಣವಾಗುತ್ತದೆ. ಶಾರದಾಳ ಬದುಕು ಕಿರಣ್‌ಗೆ ಸೀಮಿತವಾಗುತ್ತದೆ. ಶಾಲೆಗೆ ಹೋಗಲಾರಂಭಿಸಿದ ಕಿರಣ್ ತಂದೆ ಇಲ್ಲದ ಕಾರಣಕ್ಕೆ ದುಃಖಿಸುತ್ತಾನೆ. ತಂದೆ ಎಲ್ಲಿ ಎಂದು ತಾಯಿಯನ್ನು ಪ್ರಶ್ನಿಸುತ್ತಾನೆ. ಕಿರಣ್‌ನನ್ನು ಸಂತೈಸಲು ಆತನ ಸೋದರಮಾವ ಕುಮಾರ್ ತನ್ನ ಸ್ನೇಹಿತ ಅರುಣ್‌ನನ್ನು ತಂದೆ ಎಂದು ತೋರಿಸುತ್ತಾನೆ. ಮಗು ಮಾವನ ಮಾತನ್ನು ನಂಬಿ ಅರುಣ್‌ನನ್ನು ತಂದೆಯಂತೆ ಕಾಣುತ್ತದೆ.

ಕಿರಣ್‌ನ ನಂಬಿಕೆಯ ಅನುಸಾರವಾಗಿ ಅರುಣ್ ಆತನ ತಂದೆಯಾಗುತ್ತಾನಾ? ಶಾರದೆಯನ್ನು ಕೆಡಿಸಿದ ಕಿರಣ್‌ನ ನಿಜತಂದೆ ನಿಖಿಲ್, ಮತ್ತು ಮಗು ತಂದೆ ಎಂದು ನಂಬಿದ ಅರುಣ್ ಇಬ್ಬರೂ ಕುಮಾರನ ಮಿತ್ರರೇ. ಇಬ್ಬರಲ್ಲಿ ಯಾರದು ಅಪೂರ್ವ ಮೈತ್ರಿ? ಕಾದಂಬರಿಯಲ್ಲಿ ಉತ್ತರಿಸಿದ್ದಾರೆ ಸಾಯಿಸುತೆ.

Description

Apoorva Maitri is a meaningful Kannada novel by Saisuthe that explores youthful attraction, impulsive decisions, motherhood, fatherhood, and the complexities of human relationships. The story follows Sharada, who falls in love with Nikhil and takes a life-changing step without fully considering its consequences. She becomes pregnant before marriage, leading to a difficult choice between her brother Kumar’s advice and her father Ramamurthy’s belief that protecting the unborn child is important.

After giving birth to Kiran, Sharada dedicates her life to her son. As Kiran grows older, he feels the absence of a father and begins questioning his mother. To comfort him, his uncle Kumar introduces his friend Arun as his father, and the child accepts him with complete trust.

The novel raises an emotional question about love, responsibility, fatherhood, and true friendship. Will Arun truly become a father to Kiran? What happens when Kiran’s biological father Nikhil and the man he believes to be his father, Arun, are both connected to the same family? Apoorva Maitri offers the answer through an engaging and emotional narrative.

A compelling choice for readers interested in Kannada novels, family stories, emotional fiction, social novels, relationship-based literature, and Saisuthe novels from Vasantha Prakashana.

Reviews

There are no reviews yet.

Be the first to review “ಅಪೂರ್ವ ಮೈತ್ರಿ
Apoorva Maithri”

Your email address will not be published. Required fields are marked *