ದಂತದ ಗೊಂಬೆ
Dantada Gombe

₹105.00

Author: Saisuthe

 

ವಿಧಿ ಮನುಷ್ಯರ ಬಾಳಿನಲ್ಲಿ ಕಷ್ಟಗಳನ್ನಿಟ್ಟು ಅವರನ್ನು ಪರೀಕ್ಷಿಸುತ್ತದೆ. ಕಷ್ಟಗಳನ್ನು ಎದುರಿಸಲಾಗದೆ ಹೋಗುವವರು ಬದುಕಿನಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ಆದರೆ ಕಷ್ಟಗಳನ್ನು ಎದುರಿಸುವುದು ಕರ್ತವ್ಯ ಎಂದುಕೊಂಡು ಮುನ್ನಡೆಯುವವರು. ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಾರೆ. ಗೆಲುವು ಅವರನ್ನು ಅರಸಿ ಬರುತ್ತಿದೆ ಎಂಬ ಅಂಶವನ್ನು ನಿರೂಪಿಸುವ ಕಾದಂಬರಿ ಸಾಯಿಸುತೆ ಅವರ ‘ದಂತದ ಗೊಂಬೆ’.

ಹೆತ್ತವರನ್ನು ಕಳೆದುಕೊಂಡಿದ್ದ ತುಳಸಿ ಮತ್ತು ಶಮಂತ್ ಚಿಕ್ಕಪ್ಪ-ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆಯುತ್ತಾರೆ. ಚಿಕ್ಕಮ್ಮನ ದಬ್ಬಾಳಿಕೆಯನ್ನು ಸಹಿಸಿ ಸಾಕಾಗಿ ಕೊನೆಗೊಮ್ಮೆ ಪ್ರತಿಭಟಿಸಿದ ಪರಿಣಾಮ ಶಮಂತ್ ಅಲ್ಲಿಂದ ಹೊರಬಿದ್ದು ನಗರಕ್ಕೆ ಬರಬೇಕಾಗುತ್ತದೆ. ಅಲ್ಲಿಯೂ ಅವನನ್ನು ಎಲ್ಲರೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ. ಇಂಥ ಅಸಹನೀಯ ಸ್ಥಿತಿಯಲ್ಲಿಯೂ ಎರಡು ಜೀವಗಳು ಅವನ ಬದುಕಿಗೆ ಒಂದಿಷ್ಟು ತಂಪೆರೆಯುತ್ತವೆ. ತನ್ನ ಅಕ್ಕನಂತಿರುವ ಪ್ರಭಾ ಮತ್ತು ಆತ್ಮೀಯ ಸಿಂಧು ಅವನ ಬದುಕಿಗೆ ಹೊಸ ತಿರುವು ನೀಡುತ್ತಾರೆ.

ತನ್ನ ಮಾಲೀಕ ಓದಿಸುವೆ ಎಂದು ಹೇಳಿದರೂ ಮನೆಯಲ್ಲಿದ್ದ ತನ್ನ ಟಿ.ಸಿ. ಕೊಡದೆ ಸತಾಯಿಸುವ ಚಿಕ್ಕಮ್ಮ, ಅವರ ಕ್ರೌರ್ಯದಿಂದ ನರಳಿ ಅಸುನೀಗಿದ ತಂಗಿ ತುಳಸಿ, ಬೇಜವಾಬ್ದಾರಿಯ ಭಾವ ನಾಗರಾಜ, ಅವನಿಂದಾಗಿ ಕಷ್ಟ ಅನುಭವಿಸುವ ಸಹೋದರಿ ಪಂಚಮಿ ಸ್ನೇಹಕ್ಕೆ ಉದಾಹರಣೆಯಾಗಿ ನಿಲ್ಲುವ ಕಾಳಿ, ಹೀಗೆ ಬದುಕಿನಲ್ಲಿ ಕಾಣಿಸುವ ವಿವಿಧ ವ್ಯಕ್ತಿತ್ವಗಳಿಗೆ ಕನ್ನಡಿ ಹಿಡಿಯುವಂಥ ಪಾತ್ರಗಳು ಇಲ್ಲಿವೆ. ಕಡುಕಷ್ಟದ ಬದುಕನ್ನು ದಾಟಿ ಶಮಂತ ಸುಖಜೀವನವನ್ನು ಪಡೆದನಾ? ಅವನ ದಂತದ ಗೊಂಬೆ ಅವನ ಜೀವನದಲ್ಲಿ ಪಾಲು ಪಡೆಯುವಳೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದೆ ಸಾಯಿಸುತೆಯ ಕಾದಂಬರಿ ‘ದಂತದ ಗೊಂಬೆ’.

Description

Dantada Gombe is an inspiring Kannada novel by Saisuthe that explores hardship, courage, family relationships, and the determination to overcome life’s challenges. The story follows Shamanth and Tulasi, who lose their parents at an early age and grow up under the care of their relatives. Shamanth faces cruelty, exploitation, and repeated struggles, but continues to move forward with courage and perseverance.

After leaving his uncle’s home, Shamanth comes to the city, where even there, people try to take advantage of his vulnerable situation. Amid these difficulties, Prabha and Sindhu bring hope and emotional support into his life. The novel introduces a range of memorable characters, each reflecting different aspects of human nature, from cruelty and irresponsibility to friendship, affection, and sacrifice.

Through Shamanth’s journey, Dantada Gombe highlights how those who face hardships with patience and determination can ultimately emerge stronger, much like gold refined by fire. Will Shamanth overcome his difficult past and find happiness? Who will become the “Dantada Gombe” in his life?

A compelling choice for readers interested in Kannada novels, family novels, emotional fiction, inspirational stories, social novels, women centric literature, and Saisuthe novels, available from Vasantha Prakashana.

Reviews

There are no reviews yet.

Be the first to review “ದಂತದ ಗೊಂಬೆ
Dantada Gombe”

Your email address will not be published. Required fields are marked *