ಹೃದಯರಾಗ
Hrudayaraaga

₹170.00

Author: Saisuthe

 

ತಾಯಿಗೆ ಮಗನ ಮೇಲೆ ಪ್ರೀತಿ ಇರುವುದು ಸಹಜ. ಆದರೆ ತಾನು ಆಯ್ಕೆ ಮಾಡಿದ ಹೆಣ್ಣನ್ನೇ ಆತ ಮದುವೆಯಾಗಬೇಕೆಂದು ಬಯಸುವುದು ತಪ್ಪು. ಮಗ ಪ್ರೀತಿಸಿದ ಹುಡುಗಿಯನ್ನು ಮದುವೆಯಾದ ಬಳಿಕ ಸೊಸೆ ತನ್ನ ಆಯ್ಕೆಯ ಹುಡುಗಿಯಲ್ಲ ಎನ್ನುವ ಕಾರಣಕ್ಕೆ ಹಿಂಸಿಸುವುದು ಕ್ರೌರ್ಯ.

ಮದುವೆಗೆ ಮೊದಲೇ ಗರ್ಭಿಣಿಯಾಗಿ ಅದಕ್ಕೆ ಕಾರಣನಾದವನನ್ನು ತೋರಿಸುವ ಇಚ್ಛೆಯಿಲ್ಲದ ಸಂಧ್ಯಾಳನ್ನು ಅಕ್ಕರೆಯಿಂದಲೇ ನೋಡಿಕೊಂಡವರು ಆಕೆಯ ಅಣ್ಣ ಲಕ್ಷ್ಮೀಪತಿ. ಮಗು ಹೆತ್ತು ಸಂಧ್ಯ ಮರಣಿಸುತ್ತಾಳೆ. ಇದರಿಂದ ನೊಂದ ಲಕ್ಷ್ಮೀಪತಿ ತಾನು ಮದುವೆಯಾಗದೆ ತಂಗಿಯ ಮಗಳು ಪ್ರಭಾಳನ್ನು ಮುದ್ದಿನಿಂದ ಬೆಳೆಸುತ್ತಾರೆ. ಪ್ರಾಯಪ್ರಬುದ್ಧೆಯಾದ ಪ್ರಭಾಳನ್ನು ಚಂದ್ರಮೋಹನ ಪ್ರೀತಿಸಿ ಮದುವೆಯಾಗುತ್ತಾನೆ. ಆದರೆ ಅತ್ತೆ ಸುಭದ್ರಮ್ಮಳ ಕ್ರೌರ್ಯಕ್ಕೆ ಸಿಲುಕಿ ಪ್ರಭಾ ನರಳುತ್ತಾಳೆ. ಅತ್ತೆಯ ಕ್ರೌರ್ಯ ಸಹಿಸಲಾಗದ ಮೂರು ತಿಂಗಳ ಗರ್ಭಿಣಿ ಪ್ರಭಾ ಮನೆಯಿಂದ ಹೊರಬಿದ್ದಾಗ ಅವಳ ಬದುಕೂ ಅವಳ ತಾಯಿಯಂತೆಯೇ ಆಯಿತಲ್ಲವೇ ಎಂದು ಮರುಗುತ್ತಾರೆ ಲಕ್ಷ್ಮೀಪತಿ. ಇತ್ತ ಪ್ರಭಾಳ ಗಂಡ ಚಂದ್ರಮೋಹನನಿಗೆ ಇನ್ನೊಂದು ಮದುವೆ ಮಾಡುವ ಹವಣಿಕೆ ಚಂದ್ರಮೋಹನನ ಅಮ್ಮ ಸುಭದ್ರಮ್ಮನದು.

ಹೀಗೆ ಹರಿಯುತ್ತದೆ ’ಹೃದಯರಾಗ’ ಕಾದಂಬರಿಯ ಕಥಾಪ್ರವಾಹ. ಇಲ್ಲಿ ಲಕ್ಷ್ಮೀಪತಿಯಂಥ ಸಜ್ಜನರಿದ್ದಂತೆ, ಜಗನ್ನಾಥರೆಂಬ ನಯವಂಚಕನಿದ್ದಾನೆ. ಸುಭದ್ರಮ್ಮನಂಥ ಕ್ರೂರಿ ಇದ್ದರೆ ಸಂಧ್ಯಾ, ಪ್ರಭಾಳಂಥ ಸೌಮ್ಯ ಪಾತ್ರಗಳಿವೆ. ಇದೆಲ್ಲಾ ಇರುವುದು ಸಾಯಿಸುತೆಯವರ ’ಹೃದಯರಾಗ’ ಎಂಬ ಹೃದಯಂಗಮ ಕಾದಂಬರಿಯಲ್ಲಿ.

Description

Hrudaya Raaga is a touching Kannada novel by Saisuthe that explores family relationships, motherhood, marital conflict, love, sacrifice, and the harsh realities of domestic cruelty. The story begins with Sandhya, who becomes pregnant before marriage and is lovingly cared for by her brother Lakshmipathi. After Sandhya’s death following childbirth, Lakshmipathi raises her daughter Prabha with affection and dedication.

When Prabha grows up, she falls in love with Chandramohan and marries him. However, her married life takes a painful turn because of the cruelty of her mother-in-law Subhadramma, who refuses to accept her son’s choice. Even while pregnant, Prabha is forced to leave the house, reminding Lakshmipathi of the tragic path once faced by his sister Sandhya.

Through contrasting characters such as the compassionate Lakshmipathi, manipulative Jagannath, cruel Subhadramma, and gentle Sandhya and Prabha, the novel presents different shades of human nature and family life.

A compelling choice for readers interested in Kannada novels, family novels, women-centric literature, emotional fiction, social novels, relationship stories, and Saisuthe novels. A valuable addition to collections of Kannada books and Kannada literature from Vasantha Prakashana.

Reviews

There are no reviews yet.

Be the first to review “ಹೃದಯರಾಗ
Hrudayaraaga”

Your email address will not be published. Required fields are marked *