ಸ್ವರ್ಗದ ಹೂ
Swargada Hoo

₹120.00

Author: Saisuthe

 

ಮದುವೆಗಳು ನಿಶ್ಚಯವಾಗುವುದು ಸ್ವರ್ಗದಲ್ಲಿ ಎಂಬುದು ಒಂದು ನಂಬಿಕೆ. ಅದು ನಿಜವಾದರೆ ಯಾರು ಯಾರಿಗೆ ಜನಿಸಬೇಕು ಎನ್ನುವುದೂ ಸ್ವರ್ಗದಲ್ಲಿಯೇ ನಿಶ್ಚಯವಾಗಿರಬೇಕಲ್ಲವೆ?

ಸೋದರ ಸಂಬಂಧದಲ್ಲಿ ವಿವಾಹ ಸಲ್ಲದು ಎನ್ನುತ್ತದೆ ವಿಜ್ಞಾನ. ಇದರ ಅರಿವಿದ್ದೂ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ನಿಸರ್ಗಳ ಬೆದರಿಕೆಗೆ ಮಣಿದು ಶಶಾಂಕ ಆಕೆಯನ್ನು ಮದುವೆಯಾಗುತ್ತಾನೆ. ಮದುವೆಯಾಗಿ ಬಹಳ ವರ್ಷ ಕಳೆದರೂ ನಿಸರ್ಗ ತಾಯಿಯಾಗದಿದ್ದಾಗ ದಂಪತಿ ಬಾಡಿಗೆತಾಯಿಯ ಮೊರೆಹೋಗುತ್ತಾರೆ. ಅಪಘಾತವೊಂದರಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡು ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದ ಪ್ರಿಯಂವದಾಳನ್ನು ಬಾಡಿಗೆತಾಯಿಯಾಗಿ ಆರಿಸಿಕೊಳ್ಳುತ್ತಾರೆ. ಆದರೆ ನಿಸರ್ಗಳ ಉದರದಲ್ಲಿಯೇ ಮಗು ಜನಿಸಿರುವುದಾಗಿ ಕುಟುಂಬದವರಿಗೆ ಸುಳ್ಳು ಹೇಳುತ್ತಾರೆ. ಸೀಮಂತವೂ ಸೇರಿದಂತೆ ಎಲ್ಲ ಉಪಚಾರಗಳನ್ನು ನಿಸರ್ಗಳಿಗೆ ಮಾಡುವಾಗ ಇಂಥ ಸೌಭಾಗ್ಯ ಇಲ್ಲದಿರುವ ಬಾಡಿಗೆತಾಯಿಯ ಬಗ್ಗೆ ಶಶಾಂಕನಿಗೆ ಅನುಕಂಪ ಹುಟ್ಟುತ್ತದೆ.

ಮಗು ಜನಿಸಿ ಶಶಾಂಕನ ಕೈಸೇರಿದ ಬಳಿಕವೂ ಬಾಡಿಗೆತಾಯಿ ಶಶಾಂಕನ ನೆನಪಿನಿಂದ ಮರೆಯಾಗುವುದಿಲ್ಲ. ಕೆಲಸದ ಅಗತ್ಯವಿದ್ದ ಆಕೆ ಮುಂದೊಂದು ದಿನ ಶಶಾಂಕನ ಕಂಪನಿಗೇ ಇಂಟರ್‌ವ್ಯೂಗೆ ಬಂದಾಗ ಆಕೆಯೇ ಬಾಡಿಗೆತಾಯಿ ಎಂದು ಅರಿವಿದ್ದ ಶಶಾಂಕ ಆಕೆಗೆ ಕೆಲಸ ಕೊಡುತ್ತಾನೆ, ಆರ್ಥಿಕ ಸಹಾಯವನ್ನೂ ಮಾಡುತ್ತಾನೆ. ಆದರೆ ತಾನು ಹೆತ್ತುಕೊಟ್ಟದ್ದು ಇವರಿಗೇ ಎಂದು ಪ್ರಿಯಂವದಾಳಿಗೆ ತಿಳಿದಿರುವುದಿಲ್ಲ. ಈ ಮಧ್ಯೆ ಪ್ರಿಯಂವದಾಳ ಗುಣನಡತೆಗೆ ಮಾರುಹೋಗಿದ್ದ ಶಶಾಂಕ ಅವಳನ್ನು ಪ್ರೀತಿಸಲಾರಂಭಿಸುತ್ತಾನೆ. ಮಿಲಿಟರಿಯಲ್ಲಿ ಕ್ಯಾಪ್ಟನ್ ಆಗಿರುವ ಶಶಾಂಕನ ಸ್ನೇಹಿತ ಭಂಡಾರಿ ಪ್ರಿಯಂವದಾಳನ್ನು ಪ್ರೀತಿಸಿ ತನ್ನ ಪ್ರೇಮವನ್ನು ಪ್ರಸ್ತಾಪಿಸುವಂತೆ ಶಶಾಂಕನನ್ನು ಕೇಳುತ್ತಾನೆ. ತಾನೇ ಪ್ರೀತಿಸುವ ಹೆಣ್ಣಿನೊಂದಿಗೆ ಸ್ನೇಹಿತನ ಪ್ರೇಮಪ್ರಸ್ತಾಪ ಮಾಡುವ ಪರಿಸ್ಥಿತಿ ಶಶಾಂಕನಿಗೆ.  ಇಷ್ಟು ಹೇಳಿದ ಬಳಿಕವೂ ಕಾದಂಬರಿಯ ಬಗ್ಗೆ ಏನೂ ಹೇಳಿದಂತಾಗಲಿಲ್ಲ. ಕಾದಂಬರಿಯ ಸೊಗಸನ್ನು ಓದಿಯೇ ಸವಿಯಬೇಕು.

Description

Nisarga is an engaging Kannada novel by Saisuthe that explores marriage, surrogate motherhood, love, sacrifice, family relationships, and the unexpected turns of destiny. The story begins with Shashank, who marries Nisarga despite concerns about their close familial relationship and her emotional insistence. When the couple remains childless for years, they turn to surrogacy and choose Priyamvada, a woman facing financial hardship after losing her family in an accident.

While the family believes that Nisarga has carried the child, Priyamvada becomes the biological mother through surrogacy without knowing the true circumstances surrounding the child. After the baby is born, Shashank continues to feel concern for Priyamvada, supports her financially, and later gives her a job in his company. Over time, he becomes deeply drawn to her character and develops feelings for her. At the same time, his friend Bhandari, a military captain, asks Shashank to help him express his love for Priyamvada, creating an emotional conflict.

With its unusual storyline and layered relationships, the novel explores love, motherhood, surrogacy, marriage, sacrifice, friendship, and moral dilemmas. A compelling choice for readers interested in Kannada novels, family novels, romantic Kannada novels, emotional fiction, social novels, relationship stories, Saisuthe novels, and Kannada literature from Vasantha Prakashana.

Reviews

There are no reviews yet.

Be the first to review “ಸ್ವರ್ಗದ ಹೂ
Swargada Hoo”

Your email address will not be published. Required fields are marked *